ವಾ ಕಾಬಾ ಜಲಪಾತವು ಈಶಾನ್ಯ ಭಾರತದ ಮೇಘಾಲಯ ರಾಜ್ಯದ ಚಿರಾಪುಂಜಿ ಹತ್ತಿರ ಸ್ಥಿತವಾಗಿರುವ ಒಂದು ಜಲಪಾತ. ಜಲಪಾತವು ಕಡಿದಾದ ಶಿಲಾಮುಖದಿಂದ ಧುಮುಕಿ ಸುಮಾರು ೧೭೦-೧೯೦ ಮೀಟರ್ ಕೆಳಗಿನ ಕಂದರದಲ್ಲಿ ಬೀಳುತ್ತದೆ. ಇಬ್ಬರು ಕಿನ್ನರಿಯರು ಜಲಪಾತವಿದ್ದಲ್ಲಿ ಇರುತ್ತಾರೆಂದು ಒಂದು ಸ್ಥಳೀಯ ದಂತಕಥೆಯಿದೆ. ಶಿಲ್ಲಾಂಗ್‍ನಿಂದ ಚಿರಾಪುಂಜಿಗೆ ಹೋಗುವ ದಾರಿಯಲ್ಲಿ ಈ ಜಲಪಾತವನ್ನು ನೋಡಬಹುದು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು ==